ಮಿ ಟೂ….#Me Too…ಸದ್ಯದ ಹಾಟ್ ಟಾಪಿಕ್…! ಲೈಂಗಿಕ ಶೋಷಣೆ ವಿರುದ್ಧದ ಮಹಿಳಾ ಚಳವಳಿ. ನಿಮ್ಗೆ ಗೊತ್ತಿದ್ಯೋ ಇಲ್ವೋ…? ಈ ಮಿ ಟೂ ಅಭಿಯಾನದ ಆರಂಭ 12 ವರ್ಷ ಹಿಂದೆ. ಅಂದ್ರೆ ಇದು ಶುರುವಾಗಿದ್ದು 2006 ರಲ್ಲಿ. ಇದನ್ನು ಶುರು ಮಾಡಿದವ್ರು ಓರ್ವ ಅಮೆರಿಕನ್ ಪ್ರಜೆ, ಸಾಮಾಜಿಕ ಹೋರಾಟಗಾರ್ತಿ.
ಇದಕ್ಕೆ ಹ್ಯಾಷ್ ಟ್ಯಾಗ್ ಚಳವಳಿ ಸ್ವರೂಪ ತಂದುಕೊಟ್ಟೋರು ಹಾಲಿವುಡ್ ನಟಿ ಅಲಿಸಾ ಮಿಲನ್. ಇವ್ರು ಹಾಲಿವುಡ್ ಪ್ರೊಡ್ಯುಸರ್ ಹಾರ್ವೆ ವಿನ್ ಸ್ಟೈನ್ ನಿಂದ ತಾವು ಅನುಭವಿಸಿದ್ದ ಲೈಂಗಿಕ ಶೋಷಣೆಯನ್ನು 2017 ರಲ್ಲಿ ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಮೂಲಕ ವಿವರಿಸಿದ್ರು. ಅಲ್ಲಿಂದ #Me Too ನಿಧಾನಕ್ಕೆ ಚಳವಳಿ ರೂಪ ಪಡೀತು. ಆಮೇಲೆ ಸಾಕಷ್ಟು ಮಹಿಳೆಯರು ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯವನ್ನು ಹ್ಯಾಷ್ ಟ್ಯಾಗ್ ನಲ್ಲಿ ವಿವರಿಸಿದ್ರು. ಆದ್ರೂ ಅಷ್ಟೊಂದು ದೊಡ್ಮಟ್ಟಿನ ಸದ್ದು ಮಾಡಿರ್ಲಿಲ್ಲ. ಮೊನ್ನೆ ಮೊನ್ನೆ ಬಾಲಿವುಡ್ ನಟಿ ತನುಶ್ರೀ ದತ್ತ 2008 ರಲ್ಲಿ ನಟ ನಾನಾ ಪಾಟೇಕರ್ ಅವ್ರಿಂದ ಲೈಂಗಿಕ ಕಿರುಕುಳ ನಡೆದಿದ್ದ ಬಗ್ಗೆ ಸಂದರ್ಶನವೊಂದ್ರಲ್ಲಿ ಹೇಳಿದ್ರು. ಅಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರ #Me Too ಸಖತ್ ಸದ್ದು ಮಾಡ್ತಿದೆ. ಸ್ಟಾರ್ ನಟಿಯರು, ಪತ್ರಕರ್ತೆಯರು #Me Too ಮೂಲಕ ತಮಗಾದ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಳ್ತಿದ್ದಾರೆ. ರಾಜಕಾರಣಿಗಳು,ಚಿತ್ರರಂಗದವ್ರು, ಜನಪ್ರಿಯ ಪತ್ರಕರ್ತರ ವಿರುದ್ಧ #Me Too ನಲ್ಲಿ ಆರೋಪಗಳು ಕೇಳಿಬರ್ತಿವೆ.
ಹೀಗೆ ನಾಲ್ಕು ಗೋಡೆಯ ಮಧ್ಯೆ ತಮಗಾದ ದೌರ್ಜನ್ಯ, ಅವಮಾನವನ್ನು ಮಹಿಳೆಯರು ಮುಕ್ತವಾಗಿ ಹೇಳಿಕೊಳ್ಳೋ ಗಟ್ಟಿತನ ತೋರ್ತಿರೋದು ಹೆಮ್ಮೆ ವಿಷ್ಯ. ಇದ್ರಿಂದ ದೊಡ್ಡವರ ಸಣ್ಣತನ ‘ಬೆತ್ತಲೆ’ ಆಗ್ತಿದೆ. ಇದು ಮಹಿಳಾ ಪರ ದೊಡ್ಡ ಚಳವಳಿ ಆಗಿ, ಮಹಿಳಾ ಪರ ದನಿಯಾದ್ರೆ ತುಂಬಾ ಸಂತೋಷ.
ಹಾಗಾದ್ರೆ , ಈ ಲೈಂಗಿಕ ದೌರ್ಜನ್ಯ ಅಥವಾ ಯಾವ್ದೇ ರೀತಿ ದೌರ್ಜನ್ಯ ಬರೀ ಹೆಣ್ಮಕ್ಕಳ ಮೇಲೆ ಮಾತ್ರನೇ ಆಗೋದಾ…? ಊಹ್ಞೂಂ ಊಹ್ಞೂಂ….ಹೆಣ್ಣಿಂದ ಗಂಡಿನ ಮೇಲೂ ದೌರ್ಜನ್ಯಗಳು ನಡೆದಿವೆ.. ನಡೆಯುತ್ತಲೇ ಇವೆ.
ತಮ್ಮ ಮೇಲಾದ ದೌರ್ಜನ್ಯವನ್ನ ಹೆಣ್ಮಕ್ಕಳು ಹೇಳ್ಕೋಳಕೆ ಮುಜುಗರ ಪಡುವಂತೆ ಹುಡುಗರೂ ಕೂಡ ಮುಜುಗರ ಪಡ್ತಾರೆ! ನಂಗೆ ಹೆಂಡ್ತಿಯಿಂದಲೋ, ಇನ್ಯಾರೋ ಹುಡ್ಗಿಯಿಂದಲೋ ಹೆರಾಸ್ಮೆಂಟ್ ಆಗಿದೆ, ಆಗ್ತಿದೆ ಅಂತ ಹೇಳ್ಕೊಂಡ್ರೆ ಫ್ರೆಂಡ್ಸ್, ಅಕ್ಕಪಕ್ಕದವ್ರೆಲ್ಲಾ ನಗ್ತಾರೆ ಅನ್ನೋ ಫೀಲಿಂಗ್ ಪುರುಷರಲ್ಲಿರೋದು ಸಹಜ! ಈ ಬಗ್ಗೆ ಯಾರೂ ಕೂಡ ಯೋಚ್ನೆ ಮಾಡೋದೇ ಇಲ್ಲ.
ಯಸ್, ಇದೀಗ #Me Too ಜೊತೆಗೆ #Men Too ಅಂತನೂ ಶುರುಮಾಡೋ ಸಂದರ್ಭ. ಇದ್ರೊಂದಿಗೆ ಪುರುಷ ಚಳವಳಿಗೆ ನಾಂದಿ ಹಾಡೋ ಸಮಯ.
#Men Too : ಹೆಣ್ಣು ಗಂಡಿಂದ ನಾಲ್ಕು ಗೋಡೆಗಳ ನಡುವೆ ಹೇಗೆ ದೌರ್ಜನ್ಯಕ್ಕೆ ಒಳಗಾಗ್ತಾಳೋ ಅದೇ ರೀತಿ ಗಂಡು ಕೂಡ ದೌರ್ಜನ್ಯಕ್ಕೆ ಒಳಗಾದ ಸಾಕಷ್ಟು ಉದಾಹರಣೆಗಳು ನಮ್ಮ ನಡುವೆ ಇವೆ. ಬಟ್, ಇಂಥಾ ಯಾವ್ದೇ ಕೇಸ್ ಗಳು ಬೆಳಕಿಗೆ ಬರ್ಲಿಲ್ಲ ಅಷ್ಟೇ. ನಾಲ್ಕು ಗೋಡೆಗಳ ಮಧ್ಯೆ ಬಿಟ್ಟಾಕಿ, ಜಗಜ್ಜಾಹೀರಾಗಿ ಗಂಡಿನ ಮೇಲೆ ದೌರ್ಜನ್ಯ ನಡೀತಿದೆ. ಅಂತಹದ್ದನ್ನು ಬೆಳಕಿಗೆ ತರೋ ಪ್ರಯತ್ನ ನಮ್ದು.
ಬನ್ನಿ #Men Too ಅಭಿಯಾನ, ಪುರುಷರ ಚಳವಳಿಯ ಮೊದಲ ಹಂತವಾಗಿ ನೀರಜ್ ಎಂಬುವವರ ಕಥೆಯನ್ನು ನೋಡೋಣ.
ನೀರಜ್ ಸರ್ಕಾರಿ ಉದ್ಯೋಗಿ ಆಗಿದ್ದವರು. ಮದ್ವೆ ನಿಶ್ಚಯ ಆದಲ್ಲಿಂದ ನೋವು ಅನುಭವಿಸ್ತಲೇ ಇದ್ದಾರಂತೆ. ಈಗ ಡೈವರ್ಸ್ ಗೆ ಫೈಟ್ ಮಾಡ್ತಿದ್ದಾರೆ. ಇಷ್ಟಾದ್ರೂ ಪತ್ನಿಯ ತಲೆನೋವು ಮಾತ್ರ ತಪ್ಪಿಲ್ವಂತೆ.
ನೀರಜ್ ಅವರದ್ದು ಅರೆಂಜ್ಡ್ ಮ್ಯಾರೇಜ್ . ಇವರ ಪತ್ನಿ ನಿಧಿ ಅಂತ. ನಿಧಿ ಮತ್ತು ಅವ್ರ ಕುಟುಂಬದಿಂದ ನೀರಜ್ ತುಂಬಾ ತೊಂದ್ರೆ ಅನುಭವಿಸಿದ್ದಾರೆ, ಅನುಭವಿಸ್ತಲೇ ಇದ್ದಾರಂತೆ…!
ಮದ್ವೆ ನಿಶ್ಚಯ ಆಗುವಾಗ ನಿಧಿ ಮನೆಯವರು ಸಾಕಷ್ಟು ಸುಳ್ಳುಗಳನ್ನು ಹೇಳಿದ್ರಂತೆ. ಆಗಿದ್ದಾಗ್ಲಿ, ಮದ್ವೆ ನಿಶ್ಚಯ ಆಗಿದ್ಯಲ್ಲ ಆಗೋಣ, ಎಲ್ಲ ಒಳ್ಳೇದಾಗುತ್ತೆ ಅಂತ ಮದ್ವೆಗೆ ಒಪ್ಪಿದ್ರಂತೆ ನೀರಜ್. ಆದ್ರೆ, ಅಮೆರಿಕಾದಿಂದ ಬಂದ ವಧು ನಿಧಿ ಅಣ್ಣ ಮದ್ವೆ ದಿನ ಕಿರಿಕ್ ಮಾಡಿದ್ರಂತೆ. ನಿಮ್ ಸ್ಟೇಟಸ್ ಗೂ ನಮ್ ಸ್ಟೇಟಸ್ ಗೂ ಮ್ಯಾಚಾಗಲ್ಲ ಅಂತ ತರ್ಲೆ ತೆಗೆದಿದ್ರಂತೆ. ಅವತ್ತು ಅವರನ್ನು ಸಮಾಧಾನ ಪಡಿಸಿದ್ರಿಂದ ಮದ್ವೆ ಏನೋ ಆಯ್ತು. ಆದ್ರೆ, ಅವತ್ತು ಶುರುವಾದ ಕಿರಿಕಿರಿ ಇವತ್ತಿಗೂ ನಿಂತಿಲ್ಲ ಅಂತಾರೆ ನೊಂದಿರೋ ನೀರಜ್.
ಮದ್ವೆಯಾಗಿ ಸರಿಯಾಗಿ 1 ವರ್ಷ 10 ದಿನಕ್ಕೆ ಗಂಡು ಮಗುವಿಗೆ ನಿಧಿ ಜನ್ಮ ನೀಡಿದ್ರಂತೆ. ನಿಧಿ ಹೆರಿಗೆಗೆ ಅಂತ ತವರು ಬಳ್ಳಾರಿಗೆ ಹೋದವರು ಮರಳಿ ಬರಲೇ ಇಲ್ವಂತೆ.
ನಿಧಿ ಡೆಲಿವರಿ ಟೈಮ್ನಲ್ಲಿ ನೀರಜ್ ಬಳ್ಳಾರಿಗೆ ಹೋಗಿದ್ರಂತೆ. ಆಗ ಯಾಕಾದ್ರೂ ಇವ್ನು ಬಂದ್ನೋ ಅನ್ನೋ ರೀತಿ ಟ್ರೀಟ್ ಮಾಡಿದ್ರಂತೆ.
ಮಗು ಹುಟ್ಟಿದ ಮೇಲೂ ಹೆಂಡ್ತಿ ನಿಧಿ ತಮ್ಮ ಮನೆ ಕಡೆ ಬರ್ಲೇ ಇಲ್ಲ. ಆಮೇಲೆ ದೊಡ್ಡವರೆಲ್ಲಾ ಸೇರಿ ಪ್ಯಾಚಪ್ ಮಾಡಿದ್ರೂ ಬಹಳ ದಿನ ಸಂಬಂಧ ಉಳೀಲಿಲ್ಲ.
ಮತ್ತೊಂದು ದಿನ ಸ್ವತಃ ಸಂಡೂರು ವಿರಕ್ತ ಮಠದ ಶ್ರೀಗಳೇ ಸಂಧಾನ ಮಾಡಿ ಕಳುಹಿಸಿದ್ರೂ ಕೂಡಿ ಬಾಳಲಿಲ್ಲ ಅಂತಾರೆ ನೀರಜ್.
ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ್ರು, ನಂದಿನಿ ಲೇಔಟ್ ಠಾಣೆ ಪೊಲೀಸರು ಆಫೀಸಿಂದಲೇ ನನ್ನ ಎಳ್ಕೊಂಡೋದ್ರು. ಬೇಲ್ ತಗೊಂಡು ಆಚೆ ಬಂದೆ. ನಾನು ತಲೆಮರೆಸಿಕೊಂಡಿದ್ದೀನಿ ಅಂತಲೂ ಕೇಸ್ ಹಾಕಿ ಕಾನೂನು ಬಾಹಿರವಾಗಿ ನನ್ನ ಬ್ಯಾಂಕ್ ಅಕೌಂಟ್ ಸೀಸ್ ಮಾಡ್ಸಿದ್ರು. ಮಾನವಹಕ್ಕು ಆಯೋಗಕ್ಕೆ ಹೋಗಿ ನ್ಯಾಯಕ್ಕಾಗಿ ಮನವಿ ಮಾಡ್ದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಮಗು ನಂಗೆ ಕೊಡಿಸಿ ಅಂತ ಅಂಗಲಾಚಿದೆ . ನ್ಯಾಯಾಲಯದ ತೀರ್ಪು ನನ್ನ ಪರವಾಗಿ ಬಂದ್ರೂ ಮಗುವನ್ನು ನಂಗೆ ಕೊಟ್ಟಿರಲಿಲ್ಲ. ಆಕೆ ವಿರುದ್ಧ ಅರೆಸ್ಟ್ ವಾರೆಂಟ್ ಇಶ್ಯು ಆಗಿತ್ತು ಅಂತಾರೆ ನೀರಜ್ .
ಈಗ ನಿಧಿ ಆಸ್ತಿ ಪಾಲು ಬೇಕು ಅಂತ ಹಠ ಹಿಡಿದಿದ್ದಾರಂತೆ. ಹೀಗೆ ನೀರಜ್ ಪತ್ನಿ ಮತ್ತು ಆಕೆಯ ಮನೆಯವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಾಣುತ್ತೆ.
https://www.youtube.com/watch?v=_WNwfiKO6S4
ಇದು ಒಂದು ಉದಾಹರಣೆಯಷ್ಟೇ. ಮಹಿಳೆಯರಿಂದ ಪುರುಷರ ಕಿರುಕುಳ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 1,240 ಪ್ರಕರಣಗಳು ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದ್ದು, 1,200 ಪ್ರಕರಣಗಳು ಪುರುಷರ ಪರವಾಗಿ ಬಂದಿವೆ. ಕ್ರಮ ಕೈಗೊಳ್ಳುವಂತೆ ಆಯೋಗ ಪೊಲೀಸ್ ಇಲಾಖೆಗೆ ಸೂಚಿಸಿದೆಯಂತೆ. ಇವೆಲ್ಲದರ ಕುರಿತು ಮುಂದೆ ಮಾತಾಡುತ್ತಾ ಹೋಗೋಣ.ಅದಕ್ಕೂ ಮುನ್ನ ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದವರಿದ್ದಲ್ಲಿ ಮುಂದೆ ಬನ್ನಿ, ನಿಮ್ಮ ಅಳಲನ್ನು ಹಂಚಿಕೊಳ್ಳಿ.
#Me Too ಮತ್ತು ಈಗ ಈ ಮೂಲಕ ಆರಂಭವಾಗ್ತಿರೋ #Men Too ಎರಡೂ ಅಭಿಯಾನಗಳಿಗೆ ಯಶಸ್ಸು ಸಿಕ್ಕು, ಇವೆರಡೂ ಮಾನವ ಹಕ್ಕುಗಳ ಪರ ದನಿ ಆಗಲಿ ಅನ್ನೋ ಹಾರೈಕೆ, ಆಶಯ ನಮ್ಮದು…