Monday, October 7, 2024

ಫಿಲ್ಮ್ ಛೇಂಬರ್ ನಲ್ಲಿ ನಡೆದ ಮೀ ಟೂ ಮೀಟಿಂಗ್ ಹೈಲೆಟ್ಸ್‌

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ ಲೈಂಗಿಕ ಕಿರುಕುಳ ಆರೋಪ ಕರ್ನಾಟಕ ಫಿಲ್ಮ್ ಛೇಂಬರ್  ಮೆಟ್ಟಿಲೇರಿದೆ.

ಫಿಲ್ಮ್ ಛೇಂಬರ್ ನಲ್ಲಿ ಇಂದು ನಡೆದ ಮೀ ಟೂ ಮೀಟಿಂಗ್ ನಲ್ಲಿ ಶ್ರುತಿ ಹರಿಹರನ್ ಅವ್ರ ವರ್ತನೆ ಬಗ್ಗೆ ಅಸಮಧಾನ ವ್ಯಕ್ತವಾಗಿದೆ. ಶ್ರುತಿ ಇದ್ದಕ್ಕಿದ್ದಂತೆ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರೋದು, ಫಿಲ್ಮ್ ಛೇಂಬರ್ ಗೆ ಕಂಪ್ಲೇಂಟ್ ಕೊಡ್ದೇ , ಡೈರೆಕ್ಟ್ ಆಗಿ ಮೀಡಿಯಾ ಎದ್ರು ಹೋಗಿರೋದು ಫಿಲ್ಮ್ಛೇಂಬರ್ ಬೇಸರಕ್ಕೆ ಕಾರಣ.‌

ಶ್ರುತಿ ಫಿಲ್ಮ್ ಛೇಂಬರ್ ಗೆ ದೂರು ನೀಡಬಹುದಿತ್ತು.‌ ಕಿರುಕುಳ ಆಗಿದ್ದರೆ ಮೊದಲೇ ಯಾಕೆ ಹೇಳಿಲ್ಲ ಅನ್ನೋ ಚರ್ಚೆ ಮೀಟಿಂಗ್ ನಲ್ಲಾಯ್ತು.

ಮೀಟಿಂಗ್ ಬಳಿಕ ಛೇಂಬರ್ ಪ್ರೆಸಿಡೆಂಟ್ ಚಿನ್ನೇಗೌಡ್ರು , ಸುದ್ದಿಗಾರರ ಜೊತೆ ಮಾತಾಡಿದ್ರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಧಾನ ಸಮಿತಿ ರಚಿಸಲು ತೀರ್ಮಾನ ತೆಗೆದುಕೊಂಡಿದ್ದೀವಿ. ಚಿತ್ರರಂಗದ ಎಲ್ಲಾ ವಿಭಾಗದ ಹಿರಿಯರು ಈ‌ ಕಮಿಟಿಯಲ್ಲಿ ಇರ್ತಾರೆ ಅಂತ ಅವ್ರು ತಿಳಿಸಿದ್ರು.

ಬೆಳಗ್ಗೆ ಅರ್ಜುನ್ ಸರ್ಜಾ ಅವ್ರ ಮಾವ ರಾಜೇಶ್ ಛೇಂಬರ್ ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಶ್ರುತಿ ನಮ್ಮಲ್ಲಿ ದೂರು ಕೊಡ್ದೇ ಕೋರ್ಟ್ ಮೆಟ್ಟಿಲು ಏರಲು‌ ಮುಂದಾಗಿದ್ದಾರೆ. ಅವ್ರು ವಾಣಿಜ್ಯ ಮಂಡಳಿಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಬಹುದಿತ್ತು ಅಂತ ಬೇಸರ ವ್ಯಕ್ತಪಡಿಸಿದ್ರು.

RELATED ARTICLES

Related Articles

TRENDING ARTICLES