ಸನ್ನಿ ಲಿಯೋನ್ ಗೆ ಯಾಕಿಂಗಾಯ್ತು? ಅಷ್ಟಕ್ಕೂ ಅವ್ರು ಮಾಡಿದ ತಪ್ಪಾದ್ರು ಏನು? ಕನ್ನಡ ಸಿನಿಮಾ ಒಪ್ಕೊಂಡಿದ್ದೇ ಸನ್ನಿ ಮಾಡಿದ ತಪ್ಪೇ?
ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸನ್ನಿ ಲಿಯೋನ್ ವಿರುದ್ಧ ಪ್ರತಿಭಟನೆ ನಡೀತಾ ಇದೆ. ಇದಕ್ಕೆ ಕಾರಣ ಸನ್ನಿ ಲಿಯೋನ್ ಅವ್ರನ್ನು ‘ವೀರಮಹಾದೇವಿ’ ಚಿತ್ರಕ್ಕೆ ಆಯ್ಕೆ ಮಾಡಿದ್ದು. ಸನ್ನಿ ಹಿನ್ನೆಲೆ ನಮ್ ಕಲ್ಚರ್ ಗೆ ವಿರೋಧವಾಗಿದ್ದು, ಆದ್ರಿಂದ ಅವ್ರು ‘ವೀರಮಹಾದೇವಿ’ ಮೂವಿಯಲ್ಲಿ ನಟಿಸ್ಬಾರ್ದು ಅಂತ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
‘ವೀರ ಮಹಾದೇವಿ’ ಚಿತ್ರದಿಂದ ಸನ್ನಿ ಲಿಯೋನ್ ಅವ್ರನ್ನು ಕೈಬಿಡ್ಬೇಕು ಅಂತ ಬೆಂಗಳೂರಿನ ಟೌನ್ ಹಾಲ್ ಎದ್ರು ಕರವೇ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ನೇತೃತ್ವ ಯುವಸೇನೆ ರಾಜ್ಯಾಧ್ಯಕ್ಷ ಹರೀಶ್ ವಹಿಸಿಕೊಂಡಿದ್ರು.
ಚಿಕ್ಕಮಗಳೂರಲ್ಲೂ ಸನ್ನಿ ವಿರುದ್ಧ ಪ್ರತಿಭಟನೆ ನಡೆದಿದೆ. ಕನ್ನಡದಲ್ಲಿ ಸನ್ನಿಲಿಯೋನ್ ನಟಿಸಬಾರ್ದು ಅಂತ ಒತ್ತಾಯಿಸಿ ಕತ್ತೆ ಮೇಲೆ ಅವ್ರ ಪ್ರತಿಕೃತಿ ಇಟ್ಟು ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ದೆ ಪ್ರತಿಕೃತಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕರವೇ ಕಾರ್ಯಕರ್ತರು.
ಮೈಸೂರಲ್ಲಿ ಸನ್ನಿ ಪ್ರತಿಕೃತಿಗೆ ಚಪ್ಪಲಿ ಏಟು ಕೊಟ್ಟು ‘ವೀರಮಹಾದೇವಿ’ ಸಿನಿಮಾದಲ್ಲಿ ಸನ್ನಿ ನಟಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಸಂಸ್ಕೃತಿ ಉಳಿಸೋ ನಿಟ್ಟಿನಲ್ಲಿ ಪ್ರೊಡ್ಯೂಸರ್ ಮತ್ತು ಡೈರೆಕ್ಟರ್ ಸನ್ನಿಯನ್ನು ಚಿತ್ರದಿಂದ ಕೈ ಬಿಡಬೇಕು ಅನ್ನೋದು ಕರವೇ ಒತ್ತಾಯ.
ಅಷ್ಟೇ ಅಲ್ದೆ ನವೆಂಬರ್ 3ರಂದು ಬೆಂಗಳೂರಲ್ಲಿ ನಡೆಯಲಿರೋ ಸನ್ನಿ ಲಿಯೋನ್ ಕಾರ್ಯಕ್ರಮವನ್ನೂ ಕೂಡ ಈ ಪ್ರತಿಭಟನಾಕಾರರು ವಿರೋಧಿಸಿದ್ದಾರೆ.