Friday, July 19, 2024

ಸ್ಟಾರ್ ಗಳಿಗೇ ಕಮ್ಮಿಯಾಯ್ತೇ ಬಿಗ್ ಬಾಸ್ ಕ್ರೇಜ್..?

ಕನ್ನಡ ಬಿಗ್ ಬಾಸ್ ಸೀಸನ್ 6 ಶುರುವಾಗಿದೆ. ನಿನ್ನೆ 18 ಕಂಟೆಸ್ಟೆಂಟ್ ಗಳು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ‌.‌ ಆದ್ರೆ, ಈ ಬಾರಿ ಬಿಗ್ ಬಾಸ್ ಸಪ್ಪೆ ಅನಿಸ್ತಿದೆ. ಯಾಕಂದ್ರೆ ಸ್ಟಾರ್ ನಟ-ನಟಿಯರು ಇಲ್ಲಿಲ್ಲ..! ಮಿನಿ ಸೆಲೆಬ್ರಿಟಿಗಳು ಮತ್ತು ಕಾಮನ್ ಮೆನ್ ಗಳ ಶೋ ಇದಾಗಿದೆ.‌

ಕಾಮನ್ ಮೆನ್ ಗೆ ಅವಕಾಶ ಕೊಡೋ ಉದ್ದೇಶದಿಂದ ಸೆಲಬ್ರಿಟಿಗಳನ್ನು ದೂರ ಇಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ, ವಾಸ್ತವವೇ ಬೇರೆ ಅನ್ನೋದನ್ನು ಅಲ್ಲಗಳೆಯಲು ಆಗಲ್ಲ.

ಕಳೆದ 5ಸೀಸನ್ ಗಳಲ್ಲಿ ಸ್ಟಾರ್ ನಟ-ನಟಿಯರು ಬಿಗ್ ಬಾಸ್ ನ ಅಟ್ರಾಕ್ಷನ್ ಅನಿಸಿಕೊಂಡಿದ್ರು. ಬಿಗ್ ಬಾಸ್ ಪಾಪ್ಯುಲಾರಿಟಿ ಗ್ರಾಫ್ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗಿತ್ತು. ಆದ್ರೆ, ಈ ಬಾರಿ ಬಿಗ್ ಬಾಸ್ ಮನೇಲಿ ಜನರನ್ನು ಅಟ್ರ್ಯಾಕ್ಟ್ ಮಾಡುವಂಥಾ ಸೆಲಬ್ರಿಟಿಗಳು ಕಾಣಿಸ್ತಿಲ್ಲ.

ಈ ಹಿಂದೆ ಬಿಗ್ ಬಾಸ್ ಗೆ ಬಂದ ಸೆಲೆಬ್ರಿಟಿಗಳಲ್ಲಿ ಬಹುತೇಕರು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಕ್ಕಿಂತ ಹಾಳ್ ಮಾಡ್ಕೊಂಡಿದ್ದೇ ಹೆಚ್ಚು. ಆದ್ರಿಂದ ಬಿಗ್ ಬಾಸ್ ಮನೆಗೆ ಹೋದ್ರೆ ನಮ್ಗಿರೋ ನೇಮ್ ಅಂಡ್ ಫೇಮ್ ಕಮ್ಮಿ ಆಗುತ್ತೆ ಅನ್ನೋ ಭಯ ಸ್ಟಾರ್ ಗಳಲ್ಲಿರಬಹುದು?  ಆದ್ರಿಂದ ಬಿಗ್ ಬಾಸ್ ಸಹವಾಸ ಬೇಡ ಅಂತ ಸುಮ್ನಿದ್ದಾರೆ ಅನ್ನೋ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಈ ಬಾರಿ ರ್ಯಾಪಿಡ್ ರಶ್ಮಿ, ನಟಿ ಜಯಶ್ರೀ, ಒಗ್ಗರಣೆ ಡಬ್ಬಿ ಮುರಳಿ ಹೀಗೆ ಮೂರ್ನಾಲ್ಕು ಹೆಸರುಗಳು ಮಾತ್ರ ಸ್ವಲ್ಪ ಮಂದಿಗೆ ಗೊತ್ತಷ್ಟೇ. ಉಳಿದವ್ರು ಯಾರು? ಏನು? ಎಲ್ಲಿಂದ ಬಂದ್ರು? ಅಂತ ಗೊತ್ತೇ ಇಲ್ಲ.

ಅದಿರ್ಲಿ ಈ ಬಾರಿಯ 18 ಕಂಟೆಸ್ಟೆಂಟ್ ಗಳು ಯಾರು ಅನ್ನೋದನ್ನು ನೋಡೋಣ.

 

1) ಸೋನು ಪಾಟೀಲ್ : ಇವ್ರು ಈ ಬಾರಿಯ ಬಿಗ್ ಬಾಸ್ ನ ಫಸ್ಟ್ ಕಂಟೆಸ್ಟೆಂಟ್. ಬಾಗಲಕೋಟೆಯ ಕಡಪಹಳ್ಳಿ ಈಕೆ ಊರು. ಅಪ್ಪ ಕಲ್ಲಣ್ಣ ಗೌಡ, ಅಮ್ಮ ಮಹಾದೇವಿ. ಇವರದ್ದು ರೈತ ಕುಟುಂಬ.

 

2) ಆ್ಯಂಡ್ರೂ : 140 ಕೆ.ಜಿ ತೂಕ ಇರೋ ವ್ಯಕ್ತಿ.‌ ತನ್ನನ್ನು ತಾನು ಜ್ಯೂನಿಯರ್ ಬುಲೆಟ್ ಪ್ರಕಾಶ್ ಅಂತ ಹೇಳ್ಕೊಂಡಿದ್ದಾರೆ. ಆ್ಯಂಡ್ರೂ ‌ತೂಕ ಇದ್ರೂ ತುಂಬಾ ಆ್ಯಕ್ಟೀವ್ ಆಗಿದ್ದಾರೆ.

3) ಜಯಶ್ರೀ : ಕಿರುತೆರೆ ನಟಿ.‌ ಒಂದಿಷ್ಟು ಮಂದಿಗೆ ಇವರ ಪರಿಚಯ ಇದೆ.‌ ಈ ಬಾರಿಯ ಬಿಗ್ ಬಾಸ್ ನ ಫೆಮಿಲಿಯರ್ ಕಂಟೆಸ್ಟೆಂಟ್. ಮಿನಿ ಸೆಲೆಬ್ರಿಟಿಗಳಲ್ಲಿ ಒಬ್ರು.

4) ಎಂ.ಜೆ ರಾಕೇಶ್ : ಇವರು ಬೇಸಿಕಲಿ ರಾಜಸ್ಥಾನದವ್ರು. ಹುಟ್ಟಿದ್ದು ಬೆಂಗಳೂರಲ್ಲಿ. ಕನ್ನಡಿಗನಲ್ಲದೇ ಇದ್ರೂ ನಾನು ಕನ್ನಡಿಗ ಅಂತ ಖುಷಿಯಿಂದ ಹೇಳ್ಕೊಂಡಿದ್ದಾರೆ.

5) ಮುರಳಿ : ಮಿನಿ ಸೆಲೆಬ್ರಿಟಿ ಕೋಟಾದಲ್ಲಿರೋ ಪ್ರಮುಖರು. ಒಗ್ಗರಣೆ ಡಬ್ಬಿ ಖ್ಯಾತಿಯ ಆ್ಯಂಕರ್ ಮುರಳಿ ಈ ಬಾರಿ ಬಿಗ್ ಬಾಸ್ ನ 5 ನೇ ಕಂಟೆಸ್ಟೆಂಟ್.

6)ಅಕ್ಷತಾ ಪಾಂಡವಪುರ : ಪಲ್ಲಟ ಸಿನಿಮಾದ ನಟನೆಗೆ ರಾಜ್ಯಪ್ರಶಸ್ತಿ ಪಡೆದ ನಟಿ. ಮಂಡ್ಯದ ರಂಗಭೂಮಿ‌ ಕಲಾವಿದೆ.

7) ರಕ್ಷಿತಾ ರೈ : ಮಂಗಳೂರಿನ ರಕ್ಷಿತಾ ರೈ ಕ್ರಿಕೆಟ್ ಆಟಗಾರ್ತಿ.‌ ಧೋನಿಯ ಬಿಗ್ ಫ್ಯಾನ್. ಅವ್ರಂತೆ ಹೆಲಿಕ್ಯಾಪ್ಟರ್ ಶಾಟ್ ಕೂಡ ಹೊಡಿತಾರೆ.

8)ರ್ಯಾಪಿಡ್ ರಶ್ಮಿ : ಆರ್ ಜೆ ರ್ಯಾಪಿಡ್ ರಶ್ಮಿ ಈ ಬಾರಿಯ ಬಿಗ್ ಬಾಸ್ ನ ಪ್ರಮುಖ ಕಂಟೆಸ್ಟೆಂಟ್. ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.

9)ಆಡಮ್ ಪಾಶಾ : ಇವರು ತೃತೀಯ ಲಿಂಗಿ.‌ ಒಳ್ಳೆಯ ಡ್ಯಾನ್ಸರ್.

10) ಕವಿತಾ ಗೌಡ : ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ 10ನೇ ಕಂಟೆಸ್ಟೆಂಟ್.

11)ಜಿಮ್ ರವಿ  ಇಂಟರ್ನ್ಯಾಷನಲ್ ದೇಹದಾರ್ಢ್ಯ ಪಟು. ಅಷ್ಟೇ ಅಲ್ಲದೆ ಖಳನಟ, ಹಾಸ್ಯನಟನಾಗಿಯೂ ಗುರುತಿಸಿಕೊಂಡಿರೋ ಬಹುಮುಖ ಪ್ರತಿಭೆ ಈ ಜಿಮ್ ರವಿ.

12)ಶಶಿ ಚಿಂತಾಮಣಿ : ಕೋಲಾರದ ರೈತ ಶಶಿಚಿಂತಾಮಣಿ. ಇವರಿಗೆ ಕೃಷಿ ಕ್ಷೇತ್ರದಲ್ಲಿ ದೊಡ್ಡ ಹೆಸ್ರು ಮಾಡ್ಬೇಕು ಅಂತ ಕ‌ನಸಿದೆ.

13) ರೀಮಾ : ಇವರು ಟೆಕ್ಕಿ. ಡ್ಯಾನ್ಸ್ ಅಂದ್ರೆ ಇವರಿಗಿಷ್ಟ. ಮೊಬೈಲ್ ಇಲ್ದೆ 10ಸೆಕೆಂಡ್‌ ಕೂಡ ಇರಲ್ಲ ಅಂದಿರೋ ಈಕೆ ಬಿಗ್ ಬಾಸ್ ಮನೆಯಲ್ಲಿ ಹೇಗಿರ್ತಾರೆ ಅಂತ ಕಾದು ನೋಡ್ಬೇಕು.

14) ನವೀನ್ ಸಜ್ಜು : ‘ಹೋಗುಮ ಹೋಗುಮ ‘ ಸಾಂಗ್ ಬರ್ದಿದ್ದು ಇದೇ ನವೀನ್ ಸಜ್ಜು. ಇವರು ಸಂಗೀತ ನಿರ್ದೇಶಕ , ಗಾಯಕ.

15)ಸ್ನೇಹಾ ಆಚಾರ್ಯ : ಇವರು ನಟಿ,‌ ಕೋರಿಯೊ ಗ್ರಾಫರ್.‌ ಶಾಹಿದ್ ಕಪೂರ್ ಅವರಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

 

16) ಆನಂದ್ ಯಾದಗಿರಿ : ಬಿಎಂಟಿಸಿ ಕಂಡೆಕ್ಟರ್. ಪ್ರಯಾಣಿಕರಿಗೆ ಟಿಕೆಟ್ ಕೊಡ್ತಿದ್ದ ಇವರಿಗೀಗ ಬಿಗ್ ಬಾಸ್ ಟಿಕೆಟ್ ಸಿಕ್ಕಿದೆ.

17) ನಯನಾ ಪುಟ್ಟಸ್ವಾಮಿ : ಕಿರುತೆರೆ ನಟಿ. ಬಿಗ್ ಬಾಸ್ ಸೀಸನ್ 6 ನ 17ನೇ ಕಂಟೆಸ್ಟೆಂಟ್.

18) ಧನರಾಜ್ : ಕಂಠದಾನ ಕಲಾವಿದ ಧನರಾಜ್ ಬಿಗ್ ಬಾಸ್ ಮನೆಗೆ 18 ನೇ ಕಂಟೆಸ್ಟೆಂಟ್ ಆಗಿ ಎಂಟ್ರಿಕೊಟ್ಟಿದ್ದಾರೆ.

ಒಟ್ನಲ್ಲಿ ಈ ಬಾರಿ ಬಿಗ್ ಬಾಸ್ ಮನೇಲಿ ಸೆಲೆಬ್ರಿಗಳಿಲ್ಲ. ಆದ್ರೆ , ಒಂದಿಷ್ಟು ಮಂದಿ ಸೆಲೆಬ್ರಿಟಿ ಪಟ್ಟ ತಗೊಂಡು ಬರ್ತಾರೆ ಅನ್ನೋದ್ರಲ್ಲಿ ನೋ ಡೌಟ್.

RELATED ARTICLES

Related Articles

TRENDING ARTICLES