Friday, July 19, 2024

ವಿವಾದಕ್ಕೆ ಗುರಿಯಾಯ್ತು ಸಿಎಂ ಪತ್ನಿಯ ಸೆಲ್ಫಿ ಕ್ರೇಜ್..!

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಅವ್ರ ಪತ್ನಿ ಅಮೃತ ಫಡ್ನಾವಿಸ್ ಅವರೀಗ ‘ಸೆಲ್ಫಿ’ ವಿವಾದದಲ್ಲಿ ಸಿಲುಕಿದ್ದಾರೆ.
ಮುಂಬೈ-ಗೋವಾಕ್ಕೆ ಹೋಗುವ ಭಾರತದ ಮೊದಲ ದೇಶಿ ವಿಹಾರ ಆಂಗ್ರಿಯಾಗೆ ಶನಿವಾರ ಚಾಲನೆ ಸಿಕ್ಕಿತ್ತು. ಈ ಕಾರ್ಯಕ್ರಮಕ್ಕೆ ಹೋಗಿದ್ದ ಅಮೃತ ಫಡ್ನಾವಿಸ್ ಇದೇ ಕ್ರೂಸ್ ಎಡ್ಜ್ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಡಗಿನ ಬ್ಯಾರಿಕೇಡ್ , ಸುರಕ್ಷತೆ ಮಟ್ಟವನ್ನು ದಾಟಿದೆ ಅಂತ ಸೆಕ್ಯುರಿಟಿ ಗಮನಕ್ಕೆ ತಂದ್ರೂ ಕೂಡ ಅಮೃತಾ ಸೆಲ್ಫಿ ಕ್ಲಿಕ್ಕಿಸಿ ದುಸ್ಸಾಹಸ ಮೆರೆದಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಜವಬ್ದಾರಿ ಇಲ್ಲದವ್ರಂತೆ ಸಿಎಂ ಪತ್ನಿ ವರ್ತಿಸಿದ್ದಾರೆ ಅಂತ ಅಮೃತ ಟೀಕೆಗೆ ಗುರಿಯಾಗಿದ್ದಾರೆ. ಆ ವೀಡಿಯೋ ಇಲ್ಲಿದೆ ನೋಡಿ.

https://www.youtube.com/watch?time_continue=1&v=TV2ewc_5-Kg

RELATED ARTICLES

Related Articles

TRENDING ARTICLES