Tuesday, January 21, 2025

ಕಾನೂನು ಹೋರಾಟಕ್ಕೆ ಸೈ ಅಂದ ಶ್ರುತಿ ಮತ್ತೊಂದು ಬಾಂಬ್ ಸಿಡಿಸೋಕೆ ರೆಡಿ?

ಸ್ಯಾಂಡಲ್ ವುಡ್ ಗೂ ಮೀ ಟೂ ಬಿಸಿ ಮುಟ್ಟಿದ್ದು, ಸೌತ್ ಇಂಡಿಯಾದ ಪಾಪ್ಯುಲರ್ ಆ್ಯಕ್ಟರ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ನಿನ್ನೆಯಷ್ಟೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ ಇದೀಗ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟಕ್ಕೂ ಸೈ ಅಂದಿದ್ದಾರೆ.

ಅರ್ಜುನ್ ಸರ್ಜಾ ಅವರು ನೀಡಿರೋ ಲೈಂಗಿಕ ಕಿರುಕುಳದ ಬಗ್ಗೆ ದಾಖಲೆಗಳೂ ಕೂಡ ತನ್ನ ಬಳಿ‌ ಇದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಶ್ರುತಿ ಈ ಬಗ್ಗೆ ಪ್ರೆಸ್ ಮೀಟ್ ಕೂಡ ನಡೆಸಲಿದ್ದಾರೆ‌. ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಸಂಸ್ಥೆ ಜೊತೆ ಶ್ರುತಿ ನಡೆಸಲಿರೋ ಪ್ರೆಸ್ ಮೀಟ್ ನಲ್ಲಿ ಹೊಸ  ಬಾಂಬ್ ಸಿಡಿಸುವ ಸಾಧ್ಯತೆಯೂ ಇದೆ.

RELATED ARTICLES

Related Articles

TRENDING ARTICLES