Tuesday, January 21, 2025

ನ್ಯೂ ಲುಕ್‍ನಲ್ಲಿ ರಾಧಿಕಾ ಪಂಡಿತ್..!

ಯಶ್-ರಾಧಿಕಾ ಪಂಡಿತ್ ದಂಪತಿ  ಮುದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂದ್ರೆ ರಾಧಿಕಾ ಸದ್ಯದಲ್ಲೇ ಅಮ್ಮ ಆಗ್ತಿದ್ದಾರೆ. ಈ ಖುಷಿ ಸುದ್ದಿ ಜೊತೆಗೆ ಅವ್ರು ತಮ್ಮ ಫ್ಯಾನ್ಸ್ ಗೆ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ.

ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ಅವ್ರನ್ನ ಮದ್ವೆ ಆದ್ಮೇಲೆ ಸಿಲ್ವರ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರ್ಲಿಲ್ಲ. ಈಗ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಮದ್ವೆಗೆ ಮುಂಚೆ ಪತಿ ಯಶ್ ಗೆ ನಾಯಕಿಯಾಗಿ ನಟಿಸಿದ್ದ ‘ಸಂತು ಸ್ಟ್ರೈಟ್ ಫಾರ್ವರ್ಡ್’  ರಾಧಿಕಾ ಅವ್ರ ಇಲ್ಲಿಯವರೆಗಿನ ಕೊನೇ ಮೂವಿ ಆಗಿತ್ತು. ‘ಸಂತು ಸ್ಟ್ರೈಟ್ ಫಾರ್ವರ್ಡ್’  ರಿಲೀಸ್ ಆಗಿದ್ದು 2016ರಲ್ಲಿ. ನಂತ್ರ 2 ವರ್ಷ ರಾಧಿಕಾ ಅವ್ರ ಯಾವ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಎರಡು ವರ್ಷದ ಬಳಿಕ ರಾಧಿಕಾ ಕಮ್ ಬ್ಯಾಕ್ ಆಗ್ತಿದ್ದಾರೆ. ಒಂದೆಡೆ ಅಮ್ಮನಾಗಿ ಬಡ್ತಿ ಪಡೆಯುವ ಖುಷಿ, ಮತ್ತೊಂದೆಡೆ ‘ಆದಿಲಕ್ಷ್ಮೀ ಪುರಾಣ’ ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿರೋ ಸಂತೋಷ.

ಈಗಾಗಲೇ ಆದಿಲಕ್ಷ್ಮೀ ಪುರಾಣದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಾಧಿಕಾ ಇಷ್ಟರವರೆಗೆ ಕಾಣದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ರಾಧಿಕಾ ಪೊಲೀಸ್ ಗೆಟಪ್ ನಲ್ಲಿ ಮಿಂಚಿದ್ದಾರೆ.  ತಮ್ಮ ಈ ನ್ಯೂ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಲಾಂಗ್ ಗ್ಯಾಪ್ ನಂತ್ರ  ಕಮ್ ಬ್ಯಾಕ್ ಆಗ್ತಿರೋ ರಾಧಿಕಾ ಅವ್ರಿಗೆ ಆಲ್ ದಿ ಬೆಸ್ಟ್.

-ಅರ್ಚನಾ ಗಂಗೊಳ್ಳಿ

RELATED ARTICLES

Related Articles

TRENDING ARTICLES