ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಒನ್ ಡೇ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂ ಇಂಡೋ-ವಿಂಡೀಸ್ ಒನ್ ಡೇ ವಾರ್ ಗೆ ವೇದಿಕೆಯಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ಫೇವರೇಟ್. ಹಾಗಂತ ಪ್ರವಾಸಿ ವಿಂಡೀಸ್ ಟೀಂ ಅನ್ನು ಇಂಡಿಯಾ ಲಘುವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ಟೆಸ್ಟ್ ಸೀರಿಸ್ ಸೋತಿರೋ ವೆಸ್ಟ್ ಇಂಡೀಸ್ , ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾದಿದೆ.
ತಂಡ ಹೀಗಿದೆ :
ಭಾರತ : ವಿರಾಟ್ ಕೊಹ್ಲಿ (ನಾಯಕ) , ರೋಹಿತ್ ಶರ್ಮಾ, ಅಂಬಟಿ ರಾಯ್ಡು, ಎಂ.ಎಸ್ ಧೋನಿ, ರಿಷಬ್ ಪಂತ್, ರವೀಂದ್ರ ಜಡೇಜ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಝಲೀಲ್ ಅಹಮ್ಮದ್, ಯಜ್ವೇಂದ್ರ ಚಹಲ್.
(ಬೆಂಚ್: ಕುಲದೀಪ್ ಯಾದವ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ)
ವೆಸ್ಟ್ ಇಂಡೀಸ್ : ಜೇಸನ್ ಹೋಲ್ಡರ್ (ನಾಯಕ),
ಕಿರಾನ್ ಪೊವೆಲ್, ಚಂದ್ರಪಾಲ್ ಹೆಮ್ರಾಜ್, ಶಾಯ್ ಹೋಪ್, ಶಿಮ್ರಾನ್ ಹೆಟ್ಮರ್, ಮರ್ಲಾನ್ ಸ್ಯಾಮ್ಯುಯೆಲ್ಸ್, ರೋವ್ಮನ್ ಪೊವೆಲ್, ಜಾಸನ್ ಹೋಲ್ಡರ್ (ಸಿ), ಆಶ್ಲೆ ನರ್ಸ್ , ದೇವೇಂದ್ರ ಬಿಶೂ, ಕೆಮರ್ ರೂಚ್, ಒಶೇನ್ ಥಾಮಸ್.
(ಬೆಂಚ್ : ಫ್ಯಾಬಿಯನ್ ಅಲೆನ್, ಕೀಮೋಪಾಲ್ , ಓಬೇಡ್ ಮೆಕಾಯ್, ಸುನಿಲ್ ಅಂಬ್ರೀಸ್)