Saturday, June 22, 2024

ಟೀ ಇಂಡಿಯಾಕ್ಕೆ 323 ರನ್ ಟಾರ್ಗೆಟ್

ಪ್ರವಾಸಿ ವೆಸ್ಟ್ ಇಂಡೀಸ್ ಆತಿಥೇಯ ಟೀಂ‌‌ ಇಂಡಿಯಾಕ್ಕೆ 323 ರನ್ ಗಳ ಸವಾಲಿನ ಗುರಿ ನೀಡಿದೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ 5 ಮ್ಯಾಚ್ ಗಳ ಒನ್ ಡೇ ಸೀರೀಸ್ ನ‌ ಫಸ್ಟ್ ಮ್ಯಾಚ್ ನಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ಕಳ್ಕೊಂಡು 322 ರನ್ ಗಳಿಸಿದೆ. ವೆಸ್ಟ್ ಇಂಡೀಸ್ ಪರ ಶಿಮ್ರಾನ್ ಹೆಟ್ಮರ್‌ ಶತಕ (106) , ಕಿರಾನ್ ಪಾಲ್ ಅರ್ಧಶತಕ (51) ರನ್ ಬಾರಿಸಿ ಟೀಂ ಇಂಡಿಯಾಕ್ಕೆ ಸವಾಲಿನ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೀಂ ಇಂಡಿಯಾ ಪರ ಚಹಲ್ 3, ಶಮಿ, ಜಡೇಜಾ ತಲಾ 2, ಖಲೀಲ್ ಅಹಮ್ಮದ್ 1 ವಿಕೆಟ್ ಪಡೆದ್ರು.

RELATED ARTICLES

Related Articles

TRENDING ARTICLES