Monday, December 9, 2024

ಸೈಕಲ್  ಏರಿ ಯಾತ್ರೆ ಹೊರಟ ಸಹಕಾರಿ ಸಚಿವ..!

ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಸೈಕಲ್ ಸವಾರಿ ಹೊರಟಿದ್ದಾರೆ. ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿರೋ ತುಳಜಾಪುರ ಅಂಬಾ ಭವಾನಿ ಟೆಂಪಲ್ ಕಡೆಗೆ ಸಚಿವರು ಸೈಕಲ್ ಏರಿ ಪ್ರಯಾಣ ಬೆಳೆಸಿದ್ದಾರೆ.

ಈ ದೇವಸ್ಥಾನ ಬೀದರ್ ನಿಂದ 200 ಕಿಲೋಮೀಟರ್ ದೂರದಲ್ಲಿದೆ. ಇಷ್ಟೊಂದು ದೂರ ಸಚಿವರೇ ಸೈಕಲ್ ತುಳಿಯಲಿದ್ದಾರೆ‌. ಈ ಸೈಕಲ್ ಯಾತ್ರೆಗಾಗಿಯೇ 22, 500 ರೂ ನ ಹೆಡ್ ಲೈಟ್, ಟ್ಯುಬಲೇಸ್ ಟಯರ್ ಹೊಂದಿರೋ ಸೈಕಲ್ ಖರೀದಿ‌ ಮಾಡಿದ್ದಾರೆ.‌

ಮೂರು ದಿನಗಳ‌ ಟೂರ್ ಇದಾಗಿದ್ದು, ಇದೇ 24 ರ ಹುಣ್ಣಿಮೆ ದಿನ ದೇವಾಲಯ ತಲುಪಿ ಅಂಬಾ ಭವಾನಿಗೆ ವಿಶೇಷ ಪೂಜೆ ಸಲ್ಲಿಸ್ತಾರೆ. ಪ್ರತಿವರ್ಷ ಸಚಿವರು ದೇವಸ್ಥಾನಕ್ಕೆ ಹೋಗ್ತಾರೆ. ಆದ್ರೆ, ಈ ಬಾರಿ ಸೈಕಲ್ ಏರಿ ಹೋಗ್ತಾ ಇರೋದು ಸ್ಪೆಷಲ್.‌

RELATED ARTICLES

Related Articles

TRENDING ARTICLES