Friday, September 13, 2024

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಲೈಂಗಿಕ ಕಿರುಕುಳ ಆಗಿತ್ತಂತೆ..!

ಮೀ ಟೂ ಬಿಸಿ ಸ್ಯಾಂಡಲ್ ವುಡ್‍ಗೂ ತಟ್ಟಿದೆ. ನಿನ್ನೆಯಷ್ಟೇ ನಟಿ ಶ್ರುತಿ ಹರಿಹರನ್ ಸೌತ್ ಇಂಡಿಯಾದ ಪಾಪ್ಯುಲರ್ ಆ್ಯಕ್ಟರ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಇದೀಗ ಅರ್ಜುನ್ ಸರ್ಜಾ ಅವರ ಮಗಳು ನಟಿ ಐಶ್ವರ್ಯ ಸರ್ಜಾ ಕೂಡ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ ಅನ್ನೋ ವಿಷ್ಯ ಬೆಳಕಿಗೆ ಬಂದಿದೆ.

ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿರೋ ಶ್ರುತಿ ಬೆಂಬಲಕ್ಕೆ ಒಂದಿಷ್ಟು ಮಂದಿ ನಿಂತಿದ್ದಾರೆ.  ಕೆಲವರು ಶ್ರುತಿ ಬಿಟ್ಟಿ ಪ್ರಚಾರಕ್ಕೆ ಇಂಥಾ ಆರೋಪ ಮಾಡ್ತಿದ್ದಾರೆ ಅಂತ ಗರಂ ಆಗಿದ್ದಾರೆ. ಈ ಬಗ್ಗೆ ಅರ್ಜುನ್ ಸರ್ಜಾ ಮಗಳು ಹಾಗೂ ನಟಿ ಐಶ್ವರ್ಯ ಮಾತಾಡಿದ್ದು, ಈ ವೇಳೆ ತಾವು ಅನುಭವಿಸಿದ್ದ ಕಿರುಕುಳವನ್ನೂ ಬಾಯ್ಬಿಟ್ಟಿದ್ದಾರೆ.

ನಂಗೂ  ಕೆಲ ವರ್ಷಗಳ ಹಿಂದೆ ಇದೇ ರೀತಿ ಅನುಭವವಾಗಿತ್ತು.  ನಂಗೆ ಕಿರುಕುಳದ ಅನುಭವ ಹೇಗಿರುತ್ತೆ ಅಂತ ಗೊತ್ತು. ನಿಜವಾಗಿಯೂ  ಆ ಕೆಟ್ಟ ಅನುಭವವಾಗಿದ್ದರೆ ಶ್ರುತಿ ಆಗಲೇ ಆ ಬಗ್ಗೆ ಹೇಳ್ಬೇಕಿತ್ತು . ಲೈಂಗಿಕ ಶೋಷಣೆ ಮಾಡಿದ ವ್ಯಕ್ತಿಯ ಮುಖವನ್ನೂ ಕೂಡ ನೋಡಲು ಅಸಹ್ಯ ಅನ್ಸುತ್ತೆ. ಹೀಗಿರುವಾಗ ಶ್ರುತಿ ಮೂವಿ ಶೂಟಿಂಗ್ ಎಲ್ಲಾ ಮುಗಿಸಿದ್ದಾರೆ. ಅಷ್ಟೇ ಅಲ್ದೆ ಶೂಟಿಂಗ್ ಮುಗಿದ ಬಳಿಕ ನಂಗೆ ಸಿಕ್ಕಾಗ ಅರ್ಜುನ್ ಸರ್ಜಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿಮ್ಮ ತಂದೆ ನಂಗೆ ತುಂಬಾ ಇಷ್ಟವಾದ ಆ್ಯಕ್ಟರ್ ಅಂತ ಶ್ರುತಿ ನನ್ನತ್ರ ಹೇಳಿದ್ದರು. ನನ್ನ ತಂದೆಯಿಂದ ಶ್ರುತಿ ನಿಜಕ್ಕೂ ಕಿರುಕುಳ ಅನುಭವಿಸಿದ್ದರೆ ತಾನು ಅವರ ಬಿಗ್ ಫ್ಯಾನ್ ಅಂತ ನನ್ನ ಬಳಿ ಯಾಕೆ ಹೇಳಿಕೊಳ್ತಿದ್ರು ಅಂತ ಐಶ್ವರ್ಯ ಪ್ರಶ್ನಿಸಿದ್ದಾರೆ.

 

 

RELATED ARTICLES

Related Articles

TRENDING ARTICLES