ಕಿಂಗ್ ಖಾನ್ ಶಾರುಖ್ ಖಾನ್ ಕಂಡ್ರೆ ಅನುಷ್ಕಾ ಶರ್ಮಾಗೆ ಸಿಕ್ಕಾಪಟ್ಟೆ ಭಯ ಇತ್ತಂತೆ. ಹೌದ, ನಿಜವಾಗ್ಲೂ ಶಾರುಖ್ ಗೆ ಹೆದರಿದ್ರಾ ಅನುಷ್ಕಾ?
ಹ್ಞೂಂ, ನಿಜವಾಗಿಯೂ ಅನುಷ್ಕಾಗೆ ಒಂದ್ ಕಾಲದಲ್ಲಿ ಶಾರೂಖ್ ಅಂದ್ರೆ ಭಯ ಇತ್ತಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಿಮ್ಗೆ ಗೊತ್ತಿರುವ ಹಾಗೆ ಅನುಷ್ಕಾ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದು 2008 ರಲ್ಲಿ. ‘ರಬ್ ನೆ ಬನಾ ದಿ ಜೋಡಿ’ ಇವರ ಫಸ್ಟ್ ಮೂವಿ. ಈ ಮೂವಿ ಹೀರೋ ಶಾರುಖ್ ಖಾನ್. ಫಸ್ಟ್ ಮೂವಿಯಲ್ಲೇ ಸ್ಟಾರ್ ಆ್ಯಕ್ಟರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ರು ಅನುಷ್ಕಾ.
ಆಗಿನ್ನೂ ಸಿನಿಮಾ ಇಂಡಸ್ಟ್ರಿಗೆ ಅನುಷ್ಕಾ ಹೊಸಬಳಾಗಿದ್ರಿಂದ ಶಾರುಖ್ ಜೊತೆ ಮಾತಾಡಕ್ಕೆ ಭಯಪಡ್ತಿದ್ರಂತೆ. ಶಾರುಖ್ ಖಾನ್ ಅವರಿಗೆ ತುಂಬಾ ರೆಸ್ಪೆಕ್ಟ್ ಕೊಡೋ ಇವರು, ಮೊದ ಮೊದಲು ಶಾರುಖ್ ಖಾನ್ ಕಂಡ್ರೆ ಭಯ ಪಡ್ತಿದ್ರಂತೆ. ಏನಾದ್ರು ಹೇಳ್ಬೇಕು ಅಂತ ಅನಿಸಿದ್ರೂ ಹೇಳ್ಕೊತ್ತಿರ್ಲಿಲ್ಲ. ಅವ್ರು ಏನ್ ಅನ್ಕೋತ್ತಾರೋ ಅಂತ ಸುಮ್ನೆ ಇರ್ತಿದ್ರಂತೆ. ತುಂಬಾ ಹೆದರಿಕೊಂಡು ಮಾತಾಡ್ತಿದ್ರಂತೆ. ಈಗ ಅಂಥಾ ಯಾವ್ದೇ ಭಯ ಅನುಷ್ಕಾಗೆ ಇಲ್ಲ, ಶಾರುಖ್ ಜೊತೆ ಬಾಂಡಿಂಗ್ ಚೆನ್ನಾಗಿದೆಯಂತೆ. ಯಾವ್ದೇ ರೀತಿ ಸಂಕೋಚವಿಲ್ದೆ ಮಾತಾಡ್ತಾರಂತೆ.