ಕನ್ನಡ ದೃಶ್ಯಮಾಧ್ಯಮ ಕ್ಷೇತ್ರಕ್ಕೆ ‘ಪವರ್ ಟಿವಿ’ ಪವರ್ ಫುಲ್ ಎಂಟ್ರಿಕೊಟ್ಟಿದೆ. ಸಾಧಾರಣವಾಗಿ ನ್ಯೂಸ್ ಚಾನಲ್ ಲೋಕಾರ್ಪಣೆ ಅಂದ್ರೆ ಅಲ್ಲಿ ‘ರಾಜಕೀಯ ಧುರೀಣರ ದಂಡೇ ನೆರೆದಿರುತ್ತೆ. ಒಂದಿಷ್ಟು ಸಿನಿಮಾ ಸ್ಟಾರ್ ಗಳು ಇರ್ತಾರೆ. ಆದ್ರೆ, ಪವರ್ ಟಿವಿ ನಮ್ಮ ದೇಶದ ಹೆಮ್ಮೆಯ ಯೋಧರಿಂದ ಲೋಕಾರ್ಪಣೆಗೊಂಡಿತು.
ಮಾಜಿಯೋಧರಾದ ಕ್ಯಾಪ್ಟನ್ ನವೀನ್ ನಾಗಪ್ಪ, ಏರ್ ಮಾರ್ಷಲ್ ಮುರಳಿ, ನಿವೃತ್ತ ಕರ್ನಲ್ ಅಚ್ಚಪ್ಪ ಪವರ್ ಟಿವಿಯನ್ನು ಲಾಂಚ್ ಮಾಡಿದರು. ಈ ಮೂಲಕ ಪವರ್ ಟಿವಿಯನ್ನು ವೀರ ಯೋಧರಿಗೆ ಅರ್ಪಿಸಲಾಯಿತು. ಹೀಗೆ ಮಾಧ್ಯಮ ಇತಿಹಾಸದಲ್ಲಿ ಸುದ್ದಿವಾಹಿನಿಯೊಂದು ಪ್ರಪ್ರಥಮಬಾರಿಗೆ ದೇಶಕಾಯುವ ಯೋಧರಿಗೆ ಅರ್ಪಣೆಯಾಗಿದೆ. ನೋ ನಾನ್ಸೆನ್ಸ್, ನೋ ನ್ಯೂಡಿಟಿ, ನೋ ನೆಗಿಟಿವಿಟಿ, ನೋ ನೆಗ್ಲಿಜೆನ್ಸಿ ನಮ್ಮ ಥೀಮ್. ಪವರ್ ಟಿವಿ ಇದು ನಿಮ್ಮ ಪವರ್, ಪ್ರಜಾಪ್ರಭುತ್ವದ ಪವರ್ ಅಂತ ಹೆಮ್ಮೆಯಿಂದ , ಖುಷಿಯಿಂದ ಹೇಳಿಕೊಳ್ಳುತ್ತಾ ನಿಮ್ಮ ಮುಂದೆ ಬರುತ್ತಿದ್ದೇವೆ.