Friday, September 20, 2024

ಬರಾಕ್ ಒಬಾಮ ಈಗ ಏನ್ ಮಾಡ್ತಿದ್ದಾರೆ?

ಬರಾಕ್ ಒಬಾಮ….ಇವ್ರ ಬಗ್ಗೆ ಪರಿಚಯ ಮಾಡ್ಕೊಡೊ ಅವಶ್ಯಕತೆ ಇಲ್ಲ. ಅಮೆರಿಕಾದ ಮಾಜಿ ಅಧ್ಯಕ್ಷ. ಇವ್ರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೆಚ್ಚು ಕಮ್ಮಿ ಒಂದು-ಒಂದುವರೆ ವರ್ಷ ಆಗಿದೆ. ಆದ್ರೂ ಕೂಡ ಯಾರೂ ಒಬಾಮನ ಮರೆತಿಲ್ಲ. ಆದ್ರೆ, ಅವರು ಈಗ ಏನ್ ಮಾಡ್ತಿದ್ದಾರೆ, ಆರಾಮಾಗಿ ಸುತ್ತಾಡ್ಕೊಂಡು ಕಾಲ ಕಳೀತಿದ್ದಾರ? ಫ್ಯಾಮಿಲಿ ಜೊತೆನೇ ಇರ್ತಾರ? ಹೀಗೆ ಹತ್ತಾರು ಪ್ರಶ್ನೆಗಳು ಬರೋದು ಸಹಜ.


ಒಬಾಮ ಈಗಲೂ ಫುಲ್ ಬ್ಯುಸಿ! ಅವರೇನ್ ಮಾಡ್ತಿದ್ದಾರೆ ಅಂತ ಮಾತ್ರ ಎಷ್ಟೋ ಮಂದಿಗೆ ಗೊತ್ತೇ ಇಲ್ಲ.
ಒಬಾಮ ಈಗ ಸೋಶಿಯಲ್ ಸರ್ವಿಸ್ ನಲ್ಲಿ ಬ್ಯುಸಿ. ನಿಮ್ಗೆ ಗೊತ್ತೇ ಇದೆ. ಒಬಾಮ ಅದ್ಭುತ ಮಾತುಗಾರರು ಅಂತ. ಇವ್ರ ಮಾತನ್ನು ಎಷ್ಟು ಹೊತ್ತು ಬೇಕಾದ್ರೂ ಕೂತು ಕೇಳ್ಬಹುದು.ಬೋರ್ ಹೊಡೆಯಲ್ಲ, ಕಿವಿಕೊಟ್ಟು ಕೇಳುವಂತಿರುತ್ತೆ‌. ಈಗ ಒಬಾಮ ತನ್ನ ಮಾತುಗಾರಿಕೆಯನ್ನ ಮಕ್ಕಳನ್ನು ಹುರಿದುಂಬಿಸೋಕೆ ಬಳಸಿಕೊಂಡಿದ್ದಾರೆ.
ಶಾಲಾ-ಕಾಲೇಜು ಸ್ಟೂಡೆಂಟ್ಸ್ ಅನ್ನು ಹುರುದುಂಬಿಸ್ತಿರ್ತಾರೆ. ಸಣ್ಣ-ಪುಟ್ಟ ಉದ್ಯಮ, ಅಷ್ಟೇನು ಲಾಭ ತಂದುಕೊಡ್ದೇ ಇರೋ ಬ್ಯುಸ್ ನೆಸ್ ಮಾಡ್ತಿರೋರನ್ನು ಭೇಟಿಯಾಗಿ , ಅವರ ಜೊತೆ ಡಿಸ್ಕಸ್ ಮಾಡಿ, ಪ್ರೋತ್ಸಾಹ ನೀಡೋ ಕೆಲಸ ಮಾಡ್ತಿದ್ದಾರೆ.ಮಿಲಿಟರಿ ಫ್ಯಾಮಿಲಿಗಳಿಗೆ ಪ್ರೋತ್ಸಾಹ ನೀಡೋದ್ರಲ್ಲೂ ಒಬಾಮ ಫುಲ್ ಬ್ಯುಸಿ.
ಅಷ್ಟೇ ಅಲ್ಲ ಒಬಾಮ ಚಿಕ್ ಚಿಕ್ಕ ವಿಷಯಗಳನ್ನೂ ಕೂಡ ಎಂಜಾಯ್ ಮಾಡ್ತಾರೆ. ಇತ್ತೀಚಿಗೆ ಸಣ್ಣ ಬೇಕರಿಯೊಂದಕ್ಕೆ ಹೋಗಿ ಒಂದಿಷ್ಟು ಸ್ವೀಟ್ ಕೊಂಡು, ಅದನ್ನು ಸವಿದು ಖುಷಿ ಪಟ್ಟಿದ್ದನ್ನು ಕೂಡ ನಾವಿಲ್ಲಿ ನೆನಪು ಮಾಡಿಕೊಳ್ಬಹುದು.

RELATED ARTICLES

Related Articles

TRENDING ARTICLES