Friday, July 19, 2024

ನೋಡಿ ಸ್ವಾಮಿ ಇವೇ ಕೋಟ್ಯಧಿಪತಿ ನಾಯಿಗಳು! ಸಿನಿಮಾದಿಂದ ಶ್ವಾನಗಳೂ ಸ್ಟಾರ್ ಆದ್ವು!

ಸಿನಿಮಾವೊಂದು ಗೆದ್ದಾಗ ಆ್ಯಕ್ಟರ್ ಸ್ಟಾರ್ ಆಗೋದು ಕಾಮನ್. ಒಂದೇ ಒಂದು ಸಿನಿಮಾದಿಂದ ಎಷ್ಟೋ ಜನರ ಲೈಫ್ ಚೇಂಜ್ ಆಗಿರೋದು ಗೊತ್ತೇ ಇದೆ. ಆದರೆ, ಈ ಸಿನಿಮಾಗಳಿಂದ ನಾಯಿಗಳು ಸ್ಟಾರ್ ಪಟ್ಟ ಅಲಂಕರಿಸಿ, ಕೋಟ್ಯಧಿಪತಿಗಳಾಗಿರೋ ಬಗ್ಗೆ ನಿಮ್ಗೆ ಗೊತ್ತೇ?

ಈ ಸಿನಿಮಾ ಜಗತ್ತೇ ಹೀಗೆ.ಅದೃಷ್ಟ ಇದ್ರೆ ಯಾರ್ ಏನ್ ಬೇಕಾದ್ರೂ ಆಗ್ಬಹುದು!?ಹಾಗೇ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಿಗೂ ಸಿನಿಮಾಗಳಿಂದ ಸ್ಟಾರ್ ಪಟ್ಟ ಸಿಕ್ಕಿದೆ!. ಅಂಥಾ ಸ್ಟಾರ್ ಶ್ವಾನಗಳ ಕಿರುಪರಿಚಯ ಇಲ್ಲಿದೆ.
ಅಕಿಟ : ಅಕಿಟ ಬ್ರೀಡ್ ನ ನಾಯಿಗಳಿಗೆ ಇವತ್ತು ಸಿಕ್ಕಾಪಟ್ಟೆ ಬೆಲೆ ಇದೆ. ಇಂಡಿಯಾದಲ್ಲಿ ಈ ಜಾತಿಯ ನಾಯಿಗೆ 1,50,000 ರೂ. ಇದೆ. ಈ ನಾಯಿಗೆ ಇಷ್ಟೊಂದು ಬೆಲೆ ಬರೋಕೆ ಕಾರಣ ಆ ಒಂದು ಸಿನಿಮಾ. ‘ಹಚಿಕೋ’ ಅಂತ ಜಪಾನಿ ಭಾಷೆ ಸಿನಿಮಾ. ಕೆಲವು ವರ್ಷಗಳ ಹಿಂದೆ ರಿಲೀಸ್ ಆದ ಈ ಸಿನಿಮಾದಲ್ಲಿ ಹಿರೋ ಜೊತೆಗಿದ್ದ ನಾಯಿ ಹೆಸರು ಹಚಿಕೋ ಅಂತ. ಎಲ್ಲೋ ಸಿಕ್ಕ ನಾಯಿಯನ್ನು ಹೀರೋ ಮನೆಗೆ ಕರ್ಕೊಂಡು ಬಂದು ಸಾಕ್ತಾನೆ. ಹಚಿಕೋ ಅಂತ ಅದಕ್ಕೆ ಹೆಸರಿಡ್ತಾನೆ.ಹಚಿಕೋ ಆ ಹೀರೋನನ್ನು ತುಂಬಾನೇ ಹಚ್ಕೊಂಡಿರುತ್ತೆ. ಹೀರೋ ಆಫೀಸ್ ಗೆ ಹೋಗುವಾಗ ಹಚಿಕೋ ರೈಲ್ವೆ ಸ್ಟೇಷನ್ ತನಕ ಹೋಗಿ ಬಿಟ್ಟು, ಸಂಜೆ ಆತ ವಾಪಸ್ಸು ಬರುವಾಗ ರೈಲ್ವೆ ಸ್ಟೇಷನ್ ಬಳಿಯೇ ಕಾಯ್ತಾ ಇರುತ್ತೆ. ಹೀಗೆ ಹಚಿಕೋ ದಿನಾ ತನ್ನ ಮಾಲೀಕನನ್ನು ರೈಲ್ವೆ ಸ್ಟೇಷನ್ ವರೆಗೆ ಬಿಡೋದು, ವಾಪಸ್ಸು ಕರ್ಕೊಂಡು ಬರೋದನ್ನು ಮಾಡ್ತಿರುತ್ತೆ. ಒಂದು ದಿನ ಹೀರೋ ಹಾರ್ಟ್ ಅಟ್ಯಾಕ್ ನಿಂದ ಸತ್ತೋಗ್ತಾನೆ. ಆದರೆ, ಹಚಿಕೋ ಮಾತ್ರ ತನ್ನ ಮಾಲೀಕ ಆಫೀಸ್ ಗೆ ಹೋಗಿದ್ದಾನೆ, ಬರ್ತಾನೆ ಅಂತ ರೈಲ್ವೆ ಸ್ಟೇಷನ್ ನಲ್ಲೇ ಕಾಯ್ತಿರುತ್ತೆ. ಹಾಗೇ ವರ್ಷಗಟ್ಟಲೆ ಕಾದು ಕಾದು ಅಲ್ಲೇ ಪ್ರಾಣ ಬಿಡುತ್ತೆ. ಈ ನಾಯಿ ನಿಯತ್ತಿಗೆ, ನಂಬಿಕೆಗೆ ಫೇಮಸ್. ಈ ಸಿನಿಮಾದಿಂದ ಹಚಿಕೊ ಹೆಸರಲ್ಲಿ ಅಕಿಟ ಬ್ರೀಡ್ ನ ನಾಯಿಗಳಿಗೆ ಬೇಡಿಕೆ ಬಂದಿದೆ.

ಕಾಲ : ರಜನಿಕಾಂತ್ ಅಭಿನಯದ , ಇತ್ತೀಚೆಗೆ ರಿಲೀಸ್ ಆದ ‘ಕಾಲ’ ಸಿನಿಮಾದಲ್ಲಿ ನಟಿಸಿದ್ದ ನಾಯಿಗೂ ಒಳ್ಳೆ ಕಾಲ ಬಂದಿದೆ! ನಿಮ್ಗೆ ಗೊತ್ತಿರ್ಬಹುದು? ಇತ್ತೀಚೆಗೆ ಕಾಲ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಇದ್ದ ಬೀದಿನಾಯಿಯನ್ನು ರಜನಿ ಅಭಿಮಾನಿಯೊಬ್ಬ ಬರೋಬ್ಬರಿ 2ಕೋಟಿ ರೂ ನೀಡಿ ಕೊಂಡುಕೊಂಡಿದ್ದಾನೆ.

ಪಗ್ : ವೋಡಾಫೋನ್ ಜಾಹಿರಾತಿನಲ್ಲಿ ಕಾಣಿಸಿಕೊಂಡ ಪಗ್ ಬ್ರೀಡ್ ನ ನಾಯಿಗೆ ಎಲ್ಲಿಲ್ಲದ ಬೇಡಿ ಇದೆ. ಈ ಜಾತಿಯ ಒಂದು ನಾಯಿ ಬೆಲೆ 30,000 ರೂ.

ಈ ರೀತಿ ಸಿನಿಮಾ ,ಜಾಹಿರಾತುಗಳಿಂದ ನಾಯಿಗಳು ಸ್ಟಾರ್ ಆಗಿವೆ. ನಿಮ್ಗೂ ಇಂಥಾ ಸ್ಟಾರ್ ನಾಯಿಗಳು ಗೊತ್ತಿದ್ರೆ ,ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

RELATED ARTICLES

Related Articles

TRENDING ARTICLES